ಮ್ಯಾಥ್ಯೂ ಹೆನ್ರಿ ಕ್ರಾಸ್ (ಜನನ ೧೫ ಅಕ್ಟೋಬರ್ ೧೯೯೨) ಒಬ್ಬ ಸ್ಕಾಟಿಷ್ ಕ್ರಿಕೆಟಿಗ, ಇವರು ಸ್ಕಾಟ್ಲೆಂಡ್ ಪರ ಬಲಗೈ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಆಗಿ ಆಡುತ್ತಾರೆ. ಕ್ರಾಸ್ ೨೩ ಜನವರಿ ೨೦೧೪ ರಂದು ಕೆನಡಾ ವಿರುದ್ಧ ಸ್ಕಾಟ್ಲೆಂಡ್‌ಗಾಗಿ ತನ್ನ ಏಕದಿನ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು == ವೃತ್ತಿಜೀವನ == ಮ್ಯಾಥ್ಯೂ ಕ್ರಾಸ್ ೨೦೧೧ ಅಂಡರ್ -೧೯ ವಿಶ್ವಕಪ್ ಸಮಯದಲ್ಲಿ ಸ್ಕಾಟ್ಲೆಂಡ್ ತಂಡದ ಉಪನಾಯಕನಾಗಿ ಸೇವೆ ಸಲ್ಲಿಸಿದರು. ಅವರು ಲೌಬರೋ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಮ್ಯಾಥ್ಯೂ ಒಂಬತ್ತನೇ ವಯಸ್ಸಿನಲ್ಲಿ ಅಬರ್ಡೀನ್‌ಶೈರ್ ಸಿ.ಸಿ ಯ ಸದಸ್ಯರಾದರು. ಮ್ಯಾಥ್ಯೂ ಅವರು ೨೦೧೩ ರಲ್ಲಿ ಸ್ಕಾಟ್ಲೆಂಡ್ ಹಿರಿಯರ ತಂಡಕ್ಕೆ ಆಯ್ಕೆಯಾದರು, ಅದರ ನಂತರ ಯು.ಎ.ಇಯಲ್ಲಿ ೨೦೧೩ ರ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಲು ಟಿ೨೦ ತಂಡಕ್ಕೆ ಆಯ್ಕೆಯಾದರು. ಜೂನ್ ೨೦೧೯ ರಲ್ಲಿ, ಅವರು ೨೦೧೯ ರ ಗ್ಲೋಬಲ್ ಟಿ೨೦ ಕೆನಡಾ ಪಂದ್ಯಾವಳಿಯಲ್ಲಿ ಮಾಂಟ್ರಿಯಲ್ ಟೈಗರ್ಸ್ ಫ್ರಾಂಚೈಸ್ ತಂಡಕ್ಕಾಗಿ ಆಡಲು ಆಯ್ಕೆಯಾದರು. ಅವರು ಸಂಯುಕ್ತ ಅರಬ್ ಸಂಸ್ಥಾನಡಲ್ಲಿ ನಡೆದ ೨೦೧೯ ರ ಐಸಿಸಿ ಟಿ೨೦ ವಿಶ್ವಕಪ್ ಅರ್ಹತಾ ಪಂದ್ಯಾವಳಿಗಾಗಿ ಸ್ಕಾಟ್ಲೆಂಡ್‌ನ ತಂಡದಲ್ಲಿದ್ದರು. ಸೆಪ್ಟೆಂಬರ್ ೨೦೨೧ ರಲ್ಲಿ, ೨೦೨೧ ರ ಪುರುಷರ ಟಿ೨೦ ವಿಶ್ವಕಪ್‌ಗಾಗಿ ಸ್ಕಾಟ್‌ಲ್ಯಾಂಡ್‌ನ ತಾತ್ಕಾಲಿಕ ತಂಡದಲ್ಲಿ ಕ್ರಾಸ್ ರವರನ್ನು ಹೆಸರಿಸಲಾಯಿತು. == ಉಲ್ಲೇಖಗಳು ==